ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಮಹಿಳಾ ಯಕ್ಷಗಾನ ತಾಳಮದ್ದಳೆ ಸ್ಪರ್ಧೆ ಸಮಾರೋಪ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ನವ೦ಬರ್ 14 , 2013
ಮಹಿಳೆಯರಲ್ಲೂ ಯಕ್ಷಗಾನದ ಬಗ್ಗೆ ಅಭಿಮಾನ; ಅಭಿರುಚಿ ಕಡಿಮೆಯಾಗಿಲ್ಲ. ಪುರುಷ ಪ್ರಧಾನ ಯಕ್ಷಗಾನ ಕಲೆಗೆ ಮಹಿಳೆಯರೂ ಲಗ್ಗೆಯಿಟ್ಟಿದ್ದಾರೆ. ಮಹಿಳೆಯರು ಪುರುಷರಗೊಂದಿಗೆ ಜತೆಗೂಡಿ ಕಲೆಯ ಪ್ರೌಢಿಮೆಯನ್ನು ಬೆಳೆಸುವುದರ ಜತೆಗೆ ಹಿಮ್ಮೇಳದಲ್ಲೂ ಅಭಿರುಚಿ ಬೆಳೆಸಿಕೊಳ್ಳಬೇಕಾಗಿದೆಯೆಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರು ನೀಡಿದರು.

ಅವರು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಆಳ್ವಾಸ್‌ ವಿಶ್ವನುಡಿಸಿರಿ ವಿರಾಸತ್‌ - 2013 ಅಂಗವಾಗಿ ಮಹಿಳಾ ಯಕ್ಷಗಾನ ತಾಳಮದ್ದಳೆ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಕ್ಷಗಾನ ಸಂಘಟಕಿ ವಿದ್ಯಾ ಕೋಳ್ಯೂರು ಯಕ್ಷಗಾನ ವೇದಿಕೆಯಲ್ಲಿ ಮಹಿಳೆಯರು ಮಿಂಚುತ್ತಿರುವುದು ಸಂತೋಷ. ಮಹಿಳೆಯರ ತಂಡಕ್ಕೆ ಅಂಟಿಕೊಳ್ಳದೆ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕಲೆಯ ಅಭ್ಯಾಸಕ್ಕೆ ಪ್ರೋತ್ಸಾಹ ಬೇಕೆಂದರು. ತೀರ್ಪುಗಾರರಾದ ಡಾ| ಕೋಳ್ಯೂರು ರಾಮಚಂದ್ರ ರಾವ್‌ ಹಿರಿಯ ಕಲಾವಿದರ ಸಾಲಿಗೆ ಯುವ ಕಲಾವಿದರು ಮೂಡಿ ಬರುತ್ತಿಲ್ಲ. ಪಾತ್ರಧಾರಿಗಳು ಪುರಾಣದ ಚೌಕಟ್ಟು ಮೀರದೆ ತಮ್ಮ ಪಾತ್ರದ ನಿಲುವನ್ನು ಮರೆಯದೆ ನಿರ್ವಹಿಸಬೇಕೆಂದು ನುಡಿದರು.

ಶ್ರೀಧರ ಡಿ.ಎಸ್‌ 14 ತಂಡದ 74 ಮಹಿಳಾ ಅರ್ಥಧಾರಿಗಳಲ್ಲಿ 25ಕ್ಕೂ ಹೆಚ್ಚು ಅರ್ಥದಾರಿಗಳು ಶೇ. 60 ಕ್ಕಿಂತ ಹೆಚ್ಚು ಅಂಕ ಪಡೆದು 10 ಕ್ಕು ಹೆಚ್ಚು ಮಂದಿ ಪುರುಷರೊಂದಿಗೆ ಸರಿಸಮಾನರಾಗಿ ಪಾತ್ರ ನಿರ್ವಹಿಸಲು ಶಕ್ತರಾಗಿದ್ದಾರೆ ಎಂದರು.

ತಾರಾನಾಥ ವರ್ಕಾಡಿ ಮಹಿಳಾ ತಾಳಮದ್ದಳೆ ಪಂಥದಲ್ಲಿ ಹೊಸ ಬೆಳಕೊಂಡು ಮೂಡಿಬಂದಿದೆ. ಅರ್ಥದಾರಿಗಳಲ್ಲಿ ಪಾತ್ರ ತನ್ಮಯತೆಯೊಂದಿಗೆ ಪ್ರತ್ಯುತ್ಪನ್ನಮತಿ, ಭಾಷೆ, ಜ್ಞಾನ, ನಿರೂಪಣಾ ಶೆ„ಲಿ, ಅಧ್ಯಯನಶೀಲತೆ ಬೇಕು ಎಂದರು.

ಫಲಿತಾಂಶ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಮಹಿಳಾ ಯಕ್ಷಗಾನ ತಾಳಮದ್ದಳೆ ಸ್ಪರ್ಧೆಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು ಪ್ರಥಮ ಬಹುಮಾನ ರೂ. 10 ಸಾವಿರ ನಗದು ಸಹಿತ ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಕಾಸರಗೋಡು ಮಂಗಲ್ಪಾಡಿಯ ಮಹಿಳಾ ಯಕ್ಷಕೂಟ (ವಾಲಿಮೋಕ್ಷ) ತಂಡ ಸ್ವೀಕರಿಸಿತು. ದ್ವಿತೀಯ ಬಹುಮಾನ ರೂ. 7,500 ನಗದು ಸಹಿತ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳ , ಚೇರ್ಕಾಡಿ, ಬ್ರಹ್ಮಾವರ (ಶರಸೇತುಬಂಧನ) ಪಡೆಯಿತು. ತƒತೀಯ ಬಹುಮಾನ ರೂ.5 ಸಾವಿರ ನಗದು ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಮಂಗಳೂರು ತಲಪಾಡಿಯ ಯಕ್ಷಸಿಂಧೂರ (ರಾವಣಾಂತರಂಗ) ತಂಡ ಸ್ವೀಕರಿಸಿತು. ಅಲ್ಲದೆ ಭಾಗವಹಿಸಿ ಪ್ರತಿ ತಂಡಕ್ಕೂ ತಲಾ ರೂ. 5ಸಾವಿರ ಪೊÅàತ್ಸಾಹ ಧನ ಹಾಗೂ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು.

ಆಳ್ವಾಸ್‌ ಧೀಂಕಿಟ ಯಕ್ಷಗಾನ ಕೇಂದ್ರದ ನಿರ್ದೇಶಕ ಸದಾಶಿವ ಶೆಟ್ಟಿಗಾರ್‌ ಫಲಿತಾಂಶ ಘೋಷಿಸಿದರು. ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಪ್ರವೀಣ ಪದ್ಯಾಣ ನಿರೂಪಿಸಿ, ಉಜಿರೆ ಅಶೋಕ ಭಟ್‌ ಸ್ವಾಗತಿಸಿ, ಗುರುಪ್ರಸಾದ್‌ ಭಟ್‌ ವಂದಿಸಿದರು. ದೇವಾನಂದ ಭಟ್‌, ಶ್ರೀಧರ ಪಾಂಡಿ, ಕುಬಣೂರು ಶ್ರೀಧರ್‌ ರಾವ್‌, ವೆಂಕಟ್ರಮಣ ರಾವ್‌ ಸಹಕರಿಸಿದರು.



ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ